Posts

ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಮತ್ತು ಅದರ ಮಹತ್ವ

Image
ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಮತ್ತು ಅದರ ಮಹತ್ವ ಈ ವರ್ಷದ (೨೦೧೫) ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಪ್ರೊ. ಟಕಾಕಿ ಕಜಿಟ, ಟೋಕಿಯೋ ವಿಶ್ವವಿದ್ಯಾಲಯ, ಜಪಾನ್ ಹಾಗೂ ಪ್ರೊ. ಅರ್ತುರ್ ಮ್ಯಾಕ್ಡೊನಾಲ್ಡ್ , ಕ್ವೀನ್ಸ್ ವಿಶ್ವವಿದ್ಯಾಲಯ, ಕೆನಡ ಇವರಿಬ್ಬರಿಗೆ ದೊರಕಿದೆ. ಕಣ ವಿಜ್ಞಾನ / ಪಾರ್ಟಿಕಲ್ ಫಿಸಿಕ್ಸ್ ನಲ್ಲಿನ ಒಂದು ಪ್ರಮುಖ ಸಮಸ್ಯೆಗೆ ಸೂಕ್ತ ಪರಿಹಾರವನು ಸಂಶೋಧನೆ ಹಾಗೂ ಪ್ರಯೋಗಗಳಿಂದ ಪರಿಹರಿಸಿದ ಕಾರಣಕ್ಕೆ ಈ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಸ್ವೀಡನ್ನ ವಿಜ್ಞಾನ ಅಕಾಡೆಮಿಯು ೬/೧೦/೨೦೧೫ ರಂದು ಪ್ರೊ. ಟಕಾಕಿ ಹಾಗೂ ಪ್ರೊ. ಅರ್ತುರ್ ರವರ ಹೆಸರುಗಳನ್ನ ಅಧಿಕೃತವಾಗಿ ಘೋಷ್ಹಿಸುತ್ತಾ ‘ ನ್ಯೂಟ್ರಿನೊ ಪರಿವರ್ತನೆಯಾಗುತ್ತದೆ ಎನ್ನುವ ಮೂಲಕ ಅವುಗಳಿಗೆ ದ್ರವ್ಯರಾಶಿ (ಮಾಸ್) ಇದೇ’ ಎಂಬುದ ನ್ನು ಸಾಬೀತುಪಡಿಸಿದ ಕಾರಣಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿತು.

ಮನುಕುಲ ನೆನಪಿನಲ್ಲಿ ಇಟ್ಟುಕೊಳ್ಳಲೆಬೇಕಾದ ವಿಜ್ಞಾನಿ: ಮೇರಿ ಕ್ಯೂರಿ

Image
ಮನುಕುಲ ನೆನಪಿನಲ್ಲಿ ಇಟ್ಟುಕೊಳ್ಳಲೆಬೇಕಾದ ವಿಜ್ಞಾನಿ ನವೆಂಬರ್ ೭ ೨೦೧೭ ಕ್ಕೆ ಜಗತ್ತಿನ್ ಮಹಾನ್ ಮೇಧಾವಿ , ಎರಡು ಬಾರಿ   ನೋಬೆಲ್    ಪ್ರಶಸ್ತಿ ಪಡೆದ   ಮೇರಿ ಕ್ಯೂರಿ ಜನಿಸಿ ಸರಿಯಾಗಿ ನೂರೈವತ್ತು ವರ್ಷಗಳಾದವು . ಈ ನೂರೈವತ್ತನೆ ಜನ್ಮದಿನಾಚರಣೆ ಸಂಧರ್ಭದಲ್ಲಿ ಮೇರಿ ಕ್ಯೂರಿಯವರನ್ನು ನೆನೆಯಲೆಬೇಕಿದೆ .

ಭೌತಶಾಸ್ತ್ರ ಏಂದರೇನು?

Image
Image Source: Wikipedia . ಭೌತಶಾಸ್ತ್ರ ಏಂದರೇನು? ನೀವು ‘ಭೌತಶಾಸ್ತ್ರ’ವನ್ನು ಕಲಿಯಲು ಹೆದರುತ್ತೀರಾ?  ಭೌತಶಾಸ್ತ್ರದ ಲ್ಲಿನ ಸಮೀಕರಣಗಳು (equations)ನಿಮ್ಮ ಆಲೋಚನೆಗಳನ್ನು ಒಮ್ಮೆಲೆ ಸ್ತಬ್ಧಗೊಳಿಸಬಿಡುಿ ತ್ತವೆಯೆ? – ಈ ಲೇಖನವು ನಿಮ್ಮ ಚಿಂತೆಗಳನ್ನು ದೂರಮಾಡುತ್ತದೆ.  ನೀವು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದಿರುವುದೇ ನೀವು ಭೌತಶಾಸ್ತ್ರವನ್ನು ಕಲಿಯಲು ಹೆದರುತ್ತಿರುವುದಕ್ಕೆ ಕಾರಣವಾಗಿರುತ್ತದೆ. ನೀವು ಇದಕ್ಕೆ ಬಹಳಷ್ಟು ಕಾರಣಗಳನ್ನು ನೀಡಬಹುದು.  ಆದರೆ, ಸಮಸ್ಯೆ ಇರುವುದೇ ನಿಮ್ಮಲ್ಲಿ.  ಈಗ ಪಠ್ಯಪುಸ್ತಕದಲ್ಲಿರುವಂತೆ ಭೌತಶಾಸ್ತ್ರ ಎಂದರೆ ಏನು ಎಂಬ ವಿವರಣೆಯನ್ನು (definition)) ನೋಡೋಣ.  “Physics”  ಪದವು ಗ್ರೀಕ್ ಭಾಷೆಯ “Fusis” ನಿಂದ ಬಂದಿರುವುದಾಗಿರುತ್ತದೆ.   “Fusis” ನ ಅರ್ಥ ಒಂದು ವಸ್ತುವಿನ “ಸ್ವರೂಪ ಅಥವಾ ಲಕ್ಷಣ” ಆಗಿರುತ್ತದೆ

ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು

Image
"ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು" ಕಾಲದ ಅಸೀಮ ಪರಿಧಿಯನ್ನು ವಿವರಿಸುತ್ತಾ ಕವಿ ದ.ರಾ ಬೇಂದ್ರೆಯವರು "ತಿಂಗಳಿನೂರಿನ ನೀರನು ಹೀರಿ ಮಂಗಳ ಲೋಕದ ಅಂಗಳಕ್ಕೇರಿ ಹಕ್ಕಿ ಹಾರುತಿದೆ ನೋಡಿದಿರಾ!"ಎಂದು ಹಾಡಿದರು. ಕವಿ ಕಂಡ ಸತ್ಯ ಇಂದು ನನಸಾಗಿದೆ ಮಿತ್ರರೇ.ನಿಮಗೆಲ್ಲ ತಿಳಿದಂತೆ ನಮ್ಮ ಭಾರತ ಇಂದು ಮಂಗಳನ ಕಕ್ಷೆಯಲ್ಲಿ ತನ್ನದೇ ಆದ ವ್ಯೋಮನೌಕೆಯನ್ನು ಇರಿಸಿದೆ. . ಬಾಹ್ಯಾಕಾಶಚಿತ್ರ ಮೂಲ: ವಿಕಿಪೀಡಿಯ ಇದು ಅಂಗಾರಕನ ಕುರಿತು ಮನುಜನಿಗಿದ್ದ ಅಪ್ಯಾಯಮಾನವಾದ ಕುತೂಹಲದ ಒಂದು ನಿದರ್ಶನ.ಆದರೆ ಈ ಮನುಷ್ಯನ ಕುತೂಹಲಗಳಿಗೆಲ್ಲ ಉತ್ತರ ಹುಡುಕಲು ಬಾಹ್ಯಾಕಾಶ ಯುಗವೇ ಆರಂಭವಾಗಿ ಕ್ಯುರಿಯೊಸಿಟಿ ಎಂದು ಆಂಗ್ಲಾನುವಾದದ ’ಕುತೂಹಲ’ ಎಂಬ ಹೆಸರಿನ ರೋವರ್ಗಳು ಬಂದಾಯಿತು. 'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂಬ ಸಂದೇಶ ಕೊಟ್ಟಂತಾಗುತ್ತದೆ'.ಇಂಥ ಒಂದು ಮಹತ್ವಾಂಕ್ಷೆ ಇಸ್ರೋದ ವಿಜ್ಞಾನಿಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯಲು ಆರಂಭಿಸಿದ್ದು 'ಚಂದ್ರಯಾನ-1'ರ ಸಮಯದಲ್ಲಿ.ಭಾರತದ ಮಂಗಳನೌಕೆ (ಮಾಮ್‌– ಮಾರ್ಸ್‌ಆರ್ಬಿಟರ್‌ಮಿಷನ್‌( ಮೊತ್ತ ಮೊದಲ ಯತ್ನದಲ್ಲೇ ಮಂಗಳ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿ ಈಗ ನಿರುಮ್ಮಳವಾಗಿ ಆ ಗ್ರ

ರಕ್ತ ಚಂದನದ ರಕ್ತಸಿಕ್ತ ಸತ್ಯ

Image
ರಕ್ತ ಚಂದನದ ರಕ್ತಸಿಕ್ತ ಸತ್ಯ ನಾವು ಆಫ಼್ರಿಕಾ , ನೈಜೀರಿಯ ಇತ್ಯಾದಿ ದೇಶಗಳ ವನ್ಯಜೀವಿ ಅಪರಾಧಗಳ ಬಗ್ಗೆ ಮಾತನಾಡುತ್ತಿರಬೇಕಾದರೆ , ಭಾರತ ತನ್ನ ದೇಶದ ವನ್ಯಜೀವಿ ಅಪರಾಧಗಳ ತಡೆಗೆ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಲು ಯತ್ನಿಸುತ್ತಿದೆ. ನೋವಿನ ಸಂಗತಿಯೆಂದರೆ ಭಾರತ ವನ್ಯಜೀವಿ ಅಪರಾಧಗಳನ್ನು ತಡೆಯುವಲ್ಲಿ ಅಂತಹ ಮಹತ್ತರವಾದ ಕಾರ್ಯವನ್ನೇನೂ ಮಾಡಿಲ್ಲ.       

ಉದ್ದ ಅಳತೆಗಳ ಮೂಲಮಾನ

Image
ಚಿತ್ರಿ: ಶಶಾಂಕ್ ಭಾರದ್ವಾಜ್ ಇದೀಗ ೧೬೭೬ನೇ ವರ್ಷ.ಒಬ್ಬ ಮೂರ್ಖ ಹಾಗೂ ಮೊಂಡ ರಾಜ ರಾಜ್ಯವನ್ನು ಆಳುತ್ತಿದ್ದನು.ರಾಜನ ಮೂರ್ಖ ಕಾನೂನುಗಳು ಸಂಪೂರ್ಣ ರಾಜ್ಯವನ್ನು ಅವ್ಯವಸ್ಥೆ ಹಾಗೂ ಬಡತನದೆಡೆಗೆ ವೇಗವಾಗಿ  ಕೊಂಡುಯ್ಯುತ್ತಿತ್ತು  .

ಗಣಿತಶಾಸ್ತ್ರದ ಪ್ರಾಮುಖ್ಯತೆ!

Image
ನಮಗೆ ಜೀವನದಲ್ಲಿ ಬೇರೆ ಬೇರೆ ರೀತಿಯಾದಂತಹ ಆಸಹಿಷ್ಣುತೆ (intolerance) ಇರುತ್ತದೆ . ಉದಾಹರಣೆಗೆ ನಮ್ಮಲ್ಲಿ ಹಲವರಿಗೆ ಹಾಲಿನಲ್ಲಿ ಇರುವಂತಹ ಲ್ಯಾಕ್ಟೋಸ್ ಎಂಬ ದ್ವಶರ್ಕರ ಮೈಗೆ ಒಗ್ಗುವುದಿಲ್ಲ . ಇದಕ್ಕೆ (Lactose Intolerance) ಎಂದು ಕರೆಯುತ್ತಾರೆ .