ಭೌತಶಾಸ್ತ್ರ ಏಂದರೇನು?

Image Source: Wikipedia.
ಭೌತಶಾಸ್ತ್ರ ಏಂದರೇನು?
ನೀವು ‘ಭೌತಶಾಸ್ತ್ರ’ವನ್ನು ಕಲಿಯಲು ಹೆದರುತ್ತೀರಾ?  ಭೌತಶಾಸ್ತ್ರದ ಲ್ಲಿನ ಸಮೀಕರಣಗಳು (equations)ನಿಮ್ಮ ಆಲೋಚನೆಗಳನ್ನು ಒಮ್ಮೆಲೆ ಸ್ತಬ್ಧಗೊಳಿಸಬಿಡುಿ ತ್ತವೆಯೆ? – ಈ ಲೇಖನವು ನಿಮ್ಮ ಚಿಂತೆಗಳನ್ನು ದೂರಮಾಡುತ್ತದೆ.  ನೀವು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದಿರುವುದೇ ನೀವು ಭೌತಶಾಸ್ತ್ರವನ್ನು ಕಲಿಯಲು ಹೆದರುತ್ತಿರುವುದಕ್ಕೆ ಕಾರಣವಾಗಿರುತ್ತದೆ. ನೀವು ಇದಕ್ಕೆ ಬಹಳಷ್ಟು ಕಾರಣಗಳನ್ನು ನೀಡಬಹುದು.  ಆದರೆ, ಸಮಸ್ಯೆ ಇರುವುದೇ ನಿಮ್ಮಲ್ಲಿ.  ಈಗ ಪಠ್ಯಪುಸ್ತಕದಲ್ಲಿರುವಂತೆ ಭೌತಶಾಸ್ತ್ರ ಎಂದರೆ ಏನು ಎಂಬ ವಿವರಣೆಯನ್ನು (definition)) ನೋಡೋಣ.  “Physics”  ಪದವು ಗ್ರೀಕ್ ಭಾಷೆಯ “Fusis” ನಿಂದ ಬಂದಿರುವುದಾಗಿರುತ್ತದೆ.   “Fusis” ನ ಅರ್ಥ ಒಂದು ವಸ್ತುವಿನ “ಸ್ವರೂಪ ಅಥವಾ ಲಕ್ಷಣ” ಆಗಿರುತ್ತದೆ
"ಭೌತಶಾಸ್ತ್ರವನ್ನು ವಿಜ್ಞಾನದ ಮೂಲಭೂತ ಅಂಶವೆಂದು ಪರಿಗಣಿಸಬಹುದಾಗಿದ್ದು, ಒಂದು ವಸ್ತುವಿನ ಸ್ವರೂಪ, ಗುಣ, ಲಕ್ಷಣಗಳನ್ನು ಅಭ್ಯಸಿಸುವುದೇ ಭೌತಶಾಸ್ತ್ರವಾಗಿರುತ್ತದೆ."
ಭೌತಶಾಸ್ತ್ರದ ಮೂಲ ಕಲ್ಪನೆ ಬಂದಿರುವುದೇ ಸಾಮಾನ್ಯ ಪ್ರಯೋಗಗಳು ಹಾಗೂ ತೀವ್ರ ರೀತಿಯ ಕುತೂಹಲಕಾರಿ ಅವಲೋಕನಗಳಿಂದ.
ಅಲ್ಹಾಜಾನ್(Image Source:Wikipedia)

ಉದಾಹರಣೆಗೆ – ಅಲ್ಹಾಜಾನ್ (Alhazan)ರವರು ಬೆಳಕಿನ ಗುಣ, ಲಕ್ಷಣಗಳು ಮತ್ತು ಬೆಳಕಿನಲಿ ಅಡಕವಾಗಿರುವ ಅಂಶಗಳೇನು ಎಂಬುದನ್ನು ಮೂಲಭೂತವಾಗಿ ಶೋಧನೆ ನಡೆಸಿದವರಾಗಿದ್ದಾರೆ.  ಅವರು ಬೆಳಕು ನೇರವಾಗಿ ಗೆರೆಯಂತೆ ಪ್ರವಹಿಸುತ್ತದೆ ಎಂಬುದನ್ನು ಎರಡು ಸಾಧಾರಣ ನಳಿಕೆ(pipes)ಗಳ ಮೂಲಕ ತೋರಿಸಿಕೊಟ್ಟರು.  ಅವರು ಈ ಪ್ರಯೋಗಕ್ಕಾಗಿ ಒಂದು ನೇರವಾದ ಮತ್ತೊಂದು ವಕ್ರವಾಗಿದ್ದ ಎರಡು ನಳಿಕೆಯನ್ನು ಉಪಯೋಗಿಸಿದ್ದರು.   ನೇರವಾಗಿರುವ ನಳಿಕೆಯ ಮುಖಾಂತರ ನಾವು ನಮ್ಮ ಮುಂದೆ ಇರುವ ವಸ್ತುವನ್ನು ನೋಡಬಹುದು, ಆದರೆ ವಕ್ರವಾಗಿರುವ ನಳಿಕೆಯಿಂದ ವಸ್ತುವನ್ನು ನೋಡಲು ಪ್ರಯತ್ನಿಸಿದರೆ ನಳಿಕೆಯ ಒಳಗೋಡೆಯನ್ನು ಮಾತ್ರ ನಾವು ನೋಡಬಹುದಾಗಿರುತ್ತದೆ.  ಈ ಸಾಧಾರಣ ಪ್ರಯೋಗವು ಬೆಳಕು ‘ನೇರ ಗೆರೆಯಲ್ಲಿ ಪ್ರವಹಿಸುವ (rectilinear)ಗುಣವನ್ನು ಖಾತ್ರಿಪಡಿಸುತ್ತದೆ.
ನ್ಯೂಟನ್‍ರವರ ಗುರುತ್ವಾಕರ್ಷಣೆ ಬಗೆಗಿನ ಶೋಧನೆ, ಐನ್‍ಸ್ಟೀನ್‍ರವರ ಬೆಳಕಿನ ಬೆಗೆಗಿನ ತಿಳಿವಳಿಕೆ, ಕೆಪ್ಲರ್‍ರವರ ಗ್ರಹಗಳ ಚಲನೆಯ ವಿವರಣೆ, ಸಿ.ವಿ. ರಾಮನ್‍ರವರು ಆಕಾಶದ ಬಣ್ಣ ನೀಲಿಯಾಗಿರಲು ಇರುವ ಕಾರಣದ ಬಗ್ಗೆ ನಡೆಸಿದ ಶೋಧನೆ, ಇವೆಲ್ಲವುಗಳ ಹಿಂದೆ ಇದ್ದಿದ್ದ ಸಾಮಾನ್ಯ ಪ್ರಶ್ನೆಗಳು ಮಾತ್ರ.  ಉತ್ತರಗಳಿಗಾಗಿ ಮಾಡಿದ ಹುಡುಕಾಟ ಮತ್ತು ಶೋಧನೆಗಳು ಭೌತಶಾಸ್ತ್ರದಲ್ಲಿ ನಿಶ್ಚಿತ ಕ್ರಾಂತಿಯನ್ನೇ ಮಾಡಿವೆ.  ಭೌತಶಾಸ್ತ್ರದಲ್ಲಿ “ಏಕೆ?” ಎಂಬ ಪ್ರಶ್ನೆ ಬಹು ಮುಖ್ಯವಾಗಿದ್ದು, ಇದು ನಿಮ್ಮನ್ನು ಕುತೂಹಲದಲ್ಲಿಡುತ್ತದೆ.  ನೀವು ಮಳೆಯನ್ನು ನೋಡಿದಾಗ ಅಥವಾ ಕಾಮನಬಿಲ್ಲನ್ನು (ಮಳೆಬಿಲ್ಲು) ನೋಡಿದಾಗ ಸುಮ್ಮನೆ ಇದು ಏಕೆ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಿ.  ಇದು ನೀವು ಉತ್ತರವನ್ನು ಹುಡುಕುವಂತೆ ಮಾಡುತ್ತದೆ.

ಭೌತಶಾಸ್ತ್ರದಲ್ಲಿ ಪ್ರಯೋಗವು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.  ಪ್ರಯೋಗವು ಶೋಧಿಸಿದ ವಿಚಾರವನ್ನು ಖಾತ್ರಿಪಡಿಸುತ್ತದೆ ಮತ್ತು ಪ್ರಕೃತಿಯಲ್ಲಿ ಅಡಗಿರುವ ಅಂಶಗಳನ್ನು  ಹೊರಗಾಕುತ್ತದೆ. ಪ್ರಯೋಗಗಳನ್ನು ನಡೆಸಲು ನಿಮಗೆ ದೊಡ್ಡದಾದ ಪ್ರಯೋಗಾಲಯದ ಅವಶ್ಯಕತೆ ಇಲ್ಲ.  ನಿಮ್ಮ ಸುತ್ತಮುತ್ತಲಿನಲ್ಲಿ ದೊರೆಯುವ ವಸ್ತುಗಳನ್ನೇ ಸೃಜನಾತ್ಮಕವಾಗಿ ಬಳಸಿದರೆ ಸಾಕು.  (ಅರವಿಂದ ಗುಪ್ತರವರು ಅನುಪಯುಕ್ತ ವಸ್ತುಗಳಿಂದ ತಯಾರಿಸಿರುವ ವೈಜ್ಞಾನಿಕ ಗೊಂಬೆಗಳನ್ನು ನೀವು ನಮ್ಮ ಜಾಲತಾಣ (Website)ದಲ್ಲಿ ನೋಡಬಹುದಾಗಿದೆ). ನೀವು ಪ್ರಯೋಗಗಳನ್ನು ಮಾಡುತ್ತ ಮಾಡುತ್ತ ಬಹಳಷ್ಟು ಕಲಿಯಬಹುದಾಗಿದೆ.  ಪ್ರಯೋಗಗಳನ್ನು ಮಾಡುವುದು ನಿಜವಾಗಿಯೂ ತಮಾಷೆಯಾಗಿರುತ್ತದೆ ಮತ್ತು ವಿಷಯದ ಬಗ್ಗೆ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ.  ಯಾವುದೇ ವಸ್ತುವಿನ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ನಿಮ್ಮ ಆಸಕ್ತಿ ಹೆಚ್ಚುತ್ತದೆ. 
ಸ್ಟೀಫನ್ ಹಾಕಿಂಗ್‍(Image Source:Wikipedia.)

ವಸ್ತುವಿನ ಬಗ್ಗೆ ಆಸಕ್ತಿ ಹಾಗೂ ತಿಳಿದುಕೊಳ್ಳಬೇಕೆಂಬ ಹಂಬಲ ಯಾವಾಗ ನಿಮ್ಮಲ್ಲಿ ಉಂಟಾಗುತ್ತದೋ ಆಗ ನಿಮ್ಮ ಸುತ್ತಲಿನ ಯಾವುದೇ ತೊಂದರೆಗಳು ನಿಮ್ಮನ್ನು ತಡೆದು ನಿಲ್ಲಿಸುವುದಿಲ್ಲ.  ಸ್ಟೀಫನ್ ಹಾಕಿಂಗ್‍ರವರು ಭೌತಶಾಸ್ತ್ರ್ತ್ರದ ಜೀವಂತ ದಂತಕಥೆಯಾಗಿರುತ್ತಾರೆ.  ಅವರ “ಕೃಷ್ಣರಂಧ್ರ”ದ (ಅಥವಾ ಕಪ್ಪು ರಂಧ್ರ) (blackhole) ಬಗೆಗಿನ ವಿಶ್ಲೇಷಣೆಯು ಈ ವಿಶ್ವದ ಬಗ್ಗೆಯೇ ಹೊಸ ಮಾರ್ಗದಲ್ಲಿ ಯೋಚಿಸುವಂತೆ ಮಾಡಿದೆ.  ಇವರು ಎನ್ನೂ “ALS” (Amyotrophic Lateral Sclerosis) ಎಂಬ ಖಾಯಿಲೆಯಿಂದ ನರಳುತ್ತಿದ್ದಾರೆ.  ಅವರು 17 ವರ್ಷದವರಿದ್ದಾಗ ಅವರಿಗೆ ಈ ಖಾಯಿಲೆಯಿರುವುದು ತಿಳಿದುಬಂತು.  ವೈದ್ಯರು ಸ್ಟೀಫನ್ ಹಾಕಿಂಗ್‍ರವರು ಕೆಲವೇ ವರ್ಷಗಳ ಕಾಲ ಮಾತ್ರ ಬದುಕಬಹುದೆಂದು ತಿಳಿಸಿದ್ದರು.  ಆದರೆ, ಭೌತಶಾಸ್ತ್ರದ ಬಗ್ಗೆ ಅವರ ಪ್ರೀತಿ ಹಾಗೂ ಮೋಹ ಅವರನ್ನು ಇನ್ನೂ ಬದುಕಿಸಿದೆ.  ಅವರು ಪ್ರಸಿದ್ಧ ಪುಸ್ತಕಗಳನ್ನು ರಚಿಸಿರುತ್ತಾರೆ ಮತ್ತು ಪ್ರಸಿದ್ಧ ಭಾಷಣಗಳನ್ನು ಮಾಡಿರುತ್ತಾರೆ.  ಆದ್ದರಿಂದ ನಾವು ಯಾವುದನ್ನು ಅಡಚಣೆ ಎಂದುಕೊಂಡಿರುತ್ತೇವೋ ಅದು ನಿಜವಾದ ಅಡಚಣೆಯೇ ಆಗಿರುವುದಿಲ್ಲ.  ನಿಮಗೆ ಖಂಡಿತವಾಗಿಯೂ ಉತ್ತರ ಬೇಕಿದ್ದಲ್ಲಿ ಕಠಿಣ ಪರಿಶ್ರಮದಿಂದ ಅದನ್ನು ಪಡೆಯಬಹುದು.  ಉತ್ತರಿಸಬೇಕಾದ ಬಹಳಷ್ಟು ಪ್ರಶ್ನೆಗಳು ಇನ್ನೂ ಭೌತಶಾಸ್ತ್ರದಲ್ಲಿದೆ.  ವಿಶ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಇನ್ನೂ ಅಗಾಧವಾಗಿದ್ದು, ನಾವು ಅತಿ ಸ್ವಲ್ಪ ಭಾಗವನ್ನಷ್ಟೇ ತಿಳಿದುಕೊಂಡಿದ್ದೇವೆ.  ಕೆಲಸವು ಇನ್ನೂ ಪ್ರಗತಿಯಲ್ಲಿದ್ದು ಹಾಳೆಯ ಮೇಲಿನ ಬರವಣಿಗೆಯ ಶಾಯಿ ಇನ್ನೂ  ಹಾರಿರುವುದಿಲ್ಲ.

ಮೂಲ ಲೇಖಕ -  ಪ್ರಜ್ವಲ್. ಎಂ.

ಅನುವಾದಿಸಿದವರು:ಪ್ರಿಯಾಂಕಾ
ಕರಡು ತಿದ್ದಿದವರು:ಸುರಕ್ಷಾ ಎಚ್ ಎಂ


ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿ

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!