ಮನುಕುಲ ನೆನಪಿನಲ್ಲಿ ಇಟ್ಟುಕೊಳ್ಳಲೆಬೇಕಾದ ವಿಜ್ಞಾನಿ: ಮೇರಿ ಕ್ಯೂರಿ




Marie Curie c1920.jpg






ಮನುಕುಲ ನೆನಪಿನಲ್ಲಿ ಇಟ್ಟುಕೊಳ್ಳಲೆಬೇಕಾದ ವಿಜ್ಞಾನಿ ನವೆಂಬರ್ ೨೦೧೭ ಕ್ಕೆ ಜಗತ್ತಿನ್ ಮಹಾನ್ ಮೇಧಾವಿ ,ಎರಡು ಬಾರಿ  ನೋಬೆಲ್   ಪ್ರಶಸ್ತಿ ಪಡೆದ  ಮೇರಿ ಕ್ಯೂರಿ ಜನಿಸಿ ಸರಿಯಾಗಿ ನೂರೈವತ್ತು ವರ್ಷಗಳಾದವು. ನೂರೈವತ್ತನೆ ಜನ್ಮದಿನಾಚರಣೆ ಸಂಧರ್ಭದಲ್ಲಿ ಮೇರಿ ಕ್ಯೂರಿಯವರನ್ನು ನೆನೆಯಲೆಬೇಕಿದೆ.

ಮೇರಿ ಕ್ಯೂರಿ ಹುಟ್ಟಿದ್ದು ೧೮೬೭ ನವೆಂಬರ್ ರಂದು ಪೊಲೆಂಡಿನ್ ವರ್ಸಾ ಎಂಬಲ್ಲಿ.ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪೊಲೆನ್ಡಿನಲ್ಲೇ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಪ್ಯಾರಿಸ್ಸಿಗೆ ತೆರಳಿದರು.ಅಲ್ಲಿನ ಸೌಖನ್ ವಿಶ್ವವಿದ್ಯನಿಲಯದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು.

ಮುಂದೆ ಅದೇ ವಿಶ್ವವಿದ್ಯಾನಿಲಯದ ಪಿಯರ್ ಕ್ಯೂರಿಯವರೊಡನೆ ಪ್ರೇಮವಿವಾಹವಾದರು.ಇವರಿಗೆ ಇಬ್ಬರು ಮಕ್ಕಳು ಐರೆನ್ ಕ್ಯೂರಿ ಮತ್ತು ಇವಾ ಕ್ಯೂರಿ.

ಮೇರಿ ಕ್ಯೂರಿಗೆ ಮೊದಲ ಬಾರಿಗೆ ನೋಬೆಲ್ ದೊರೆತದ್ದು ೧೯೦೩ ರಲ್ಲಿ ಭೌತಶಾಸ್ತ್ರದಲ್ಲಿ .ಅವರು ಖನಿಜಗಳ ಬಗ್ಗೆ ಸ್ಂಶೋಧನೆ ನಡೆಸುತ್ತಿದ್ದಾಗ ವಿಕಿರಣಕಾರಕ ಅಂಶಗಳನ್ನು ಹೊಂದಿದ್ದ ಪೊಲೋನಿಯಂ ಮತ್ತು ರೇಡಿಯಂಗಳನ್ನು ಸಂಶೋಧಿಸಿದರು.ಹೆನ್ರಿ ಬೆಕೆರೆಲ್ ಮತ್ತು ವಿಲಿಯಂ ಕೊನ್ರಾಡ್ ರಾಂಡ್ಜೆನ್  ಅವರ ಕೆಲಸಗಳಿಂದ ಪ್ರೇರೆಪಿತರಾದ ಕ್ಯೂರಿಯವರು ಸಂಶೋಧನೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದರು.ಮೇರಿ ಕ್ಯೂರಿ ಯುರೇನಿಯಂ ಕಿರಣಗಳ ಮೇಲೆ ಪ್ರಯೋಗಗಳನ್ನು ನಡೆಸಿ ಯುರೇನಿಯಂ ಯಾವುದೇ ರೂಪದಲ್ಲಿದ್ದರೂ ಅದರ ಕಿರಣಗಳು ಸ್ಥಿರವಾಗಿರುವುದನ್ನು ಕಂಡುಹಿಡಿದರು.ಇದು ಅಣುದಲ್ಲೇ ವಿಜ್ಞಾನ ಕ್ಷೇತ್ರ ಮಹತ್ತರ ಬದಲಾವಣೆಗೆ ಕಾರಣವಾಯಿತು.ಮುಂದೇಇದನ್ನೇ ವಿಕಿರಣಶೀಲತೆ (ರೇಡಿಯೋ ಯಾಕ್ಟಿವಿಟಿ ) ಎಂದು ಕರೆಯಲಾಯಿತು. ಇದರಿಂದ ಹೊರಹೊಮ್ಮಿದ ಮೂಲಧಾತುವಿನಿಂದ ಪೊಲೊನಿಯಂ ಎಂದು ಹೆಸರಿಟ್ಟರು. ಮುಂದೆ  ಇದೇ ವಿಕಿರಣಶೀಲತೆ ಕ್ರಿಯೆಯಿಂದ ಹೊರಹೊಮ್ಮಿದ ಮತ್ತೊಂದು ಧಾತುವಿಗೆ ರೇಡಿಯಂ ಎಂದು ಹೆಸರಿಟ್ಟರು.ಮೇರಿ ಕ್ಯೂರಿ ತಮ್ಮ ದೇಶವಾದ ಪೋಲೆಂಡಿನ ನೆನಪಿಗಾಗಿ ತಾವು ಸಂಶೋಧಿಸಿದ ಧಾತುವಿಗೆ ಪೊಲೊನಿಯಂ ಎಂಬ್ ಹೆಸರಿಟ್ಟು ದೇಶಪ್ರೇಮ ಮೆರೆದರು.



Image result for nobel prize medalರೇಡಿಯಂ ಮತ್ತು ಪೊಲೊನಿಯಂ ಸಂಶೋಧನೆಗಾಗಿ ಮೇರಿ ಕ್ಯೂರಿಯವರಿಗೆ ೧೯೧೩ರ ರಸಾಯನ ಶಾಸ್ತ್ರ ನೋಬೆಲ್ ಪ್ರಶಸ್ತಿಗೆ ಭಾಜನರಾದರು.ನೋಬೆಲ್ ಪ್ರಶಸ್ತಿ ಇತಿಹಾಸದಲ್ಲೆ ಎರಡು ಬಾರಿ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಎಂದರೆ ಮೇರಿ ಕ್ಯೂರಿ.೧೯೦೩ ನೋಬೆಲ್ ಪ್ರಶಸ್ತಿಯನ್ನು ಹೆನ್ರಿ ಬೆಕೆರಲ್ ಮತ್ತು ಗಂಡ ಪಿಯರ್ ಕ್ಯೂರಿಯೊಂದಿಗೆ ಹಂಚಿಗೊಂಡ ಮೇರಿ ೧೯೧೧ರಲ್ಲಿ ತಾವೊಬ್ಬರೇ ಪಡೆದು ಮಹತ್ತರ ಸಾಧನೆಗೈದರು.ನೋಬೆಲ್ ಪ್ರಶಸ್ಥಿಯಿಂದ ಬಂದ ಹಣವನ್ನು ತಮ್ಮ ಹೆಚ್ಚಿನ ಸಂಶೋಧನೆಗೆಂದು ಬಳಸಿಕೊಂಡದ್ದಲ್ಲದೇ ಮೊದಲ ವಿಶ್ವಯುದ್ಧದಲ್ಲಿನ  ಅನೇಕ ಸೈನಿಕರಿಗೆ ನೆರವಾದರು



Image result for nobel prize medalಬರೀ ಇವಿಷ್ಟೇ ಕಾರಗಳಿಗಾಗಿ ಮೇರಿ ಕ್ಯೂರಿಯನ್ನು ಜಗತ್ತು ನೆನಪಿಟ್ಟುಕೊಳ್ಳುತ್ತಿರಲಿಲ್ಲ.ಬೇರೆಯ ವಿಜ್ಞಾನಿಗಳಂತೆ ಇವರು ಒಬ್ಬರು ಎಂದುಕೊಳ್ಳಬಹುದಿತ್ತು.ಆದರೆ ಮೇರಿ ಕ್ಯೂರಿ ತನ್ನ ಜೀವನವನ್ನೇ ವಿಜ್ಞಾನಕ್ಕಾಗಿ ಮುಡಿಪಾಗಿಟ್ಟಿದ್ದಳು.ಟನ್ನುಗಟ್ಟಲೆ ಪಿಚ್ ಬ್ಲೆನ್ಡೆ ಅದಿರನ್ನು ತಂದು ತನ್ನ ಪ್ರಯೋಗಾಲಯದಲ್ಲಿ ಅದಿರನ್ನು ಸೋಸಲು ಶುರುವಿಟ್ಟುಕೊಂಡಳು.ಆಕೆ ನೂರಕ್ಕೆ ಒಂದು ಕಣ ರೇಡಿಯಂ ಕಣ ಇರಬಹುದೆಂದು ತಿಳಿದಿದ್ದಳು ಆದರೆ ದೊರೆತದ್ದು ಹತ್ತುಸಾವಿರದಲ್ಲಿ ಒಂದು ಕಣ.ಅದಲ್ಲದೇ  ವಿಕಿರಣಗಳು ಬಹಳಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ ತನ್ನ ಸಂಶೋಧನೆಯನ್ನು ಮುಂದುವರೆಸಿದಳು,ಅದರಲ್ಲಿ ಯಶಸ್ವಿ ಕೂಡ ಆದಳೂ .ಹಾಗೆಯೀ ತನ್ನೆಲ್ಲಾ ಸಂಶೋಧನೆಗಳಿಗೆ ಪೇಟೆಂಟ್ ಪಡೆಯದೇ ಉಚಿತವಾಗಿ ಸಿಗುವಂತೆ ಮಾಡಿದಳು. ಆದ್ರೆ ಮುಂದೊಂದು ದಿನ ಅದೇ ವಿಕಿರಣಗಳಿಂದ ಮೇರಿ ಕ್ಯೂರಿಗೆ ಕ್ಯಾನ್ಸರ್ ಎಂಬ ಮಹಾಮಾರಿ ಬಂದೊದಗಿತ್ತು. ತನ್ನ ಸಂಶೋಧನೆಯಿಂದ ಸಾವಿರಾರು ಜನರ ಪ್ರಾಣ ಉಳಿಸಿದ್ದ ಕ್ಯೂರಿ ಜುಲೈ ೧೯೩೪ರಲ್ಲಿ ಅಸುನೀಗಿದಳು.
ಮೇರಿ ಕ್ಯೂರಿಯವರ ಕೆಲಸ  ಬರೀ ವಿಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತವಾಗದೇ ಸಾಮಾಜಿಕ ,ರಾಜಕೀಯ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆಗೈದಿದ್ದಾರೆ.
ಇಂದು ವಿಜ್ಞಾನ ಶಿಕ್ಷಣವೆಂದರೇ ಅನೇಕ ವಿಧ್ಯಾರ್ಥಿಗಳಿಗೆ,ಪ್ರಾಧ್ಯಾಪಕರಿಗೆ ಕೇವಲ ತುತ್ತಿನ ಚೀಲ ತುಂಬಿಸಿಕೊಳ್ಳುವ ವಸ್ತುವಾಗಿದೆ. ಬರೀ ಪರೀಕ್ಷೆಯನ್ನು ಪಾಸು ಮಾಡಲು.ಉದ್ಯೋಗ ಪಡೆಯಲಂತಾಗಿದೆ.ನಾವು ಕಲಿತ ಶಿಕ್ಷಣ ನಮ್ಮ ಯೋಚನಾ ಲಹರಿಯನ್ನ ಪ್ರಬುದ್ಧಗೊಳಿಸುವಂತಾಗಬೇಕು.ನಾವು ಕಲಿಯುತ್ತಿರುವ ಶಿಕ್ಷಣ ಆಸಕ್ತಿದಾಯಕವೂ ಅರ್ಥಪೂರ್ಣವೂ ಆಗಬೇಕೆಂದರೆ ಮೇರಿ ಕ್ಯೂರಿಯಂತವರ ಸಾಧನೆಯನ್ನು ನಾವು ನೆನೆಯಬೇಕು.ಇಂದು ಮೇರಿ ಕ್ಯೂರಿಯ್ಂತವರ ಅನೇಕ ವಿಜ್ಞಾನಿಗಳ ನೆರವಿನಿಂದ ಮನುಕುಲಕ್ಕೆ ಉಪಯೋಗವಾಗಿದೆ.ನಾವೂ ಕೋಡ ಅವರಿಂದ ಸ್ಪೂರ್ತಿ ಪಡೆದು ನಾವುಗಳೂ ಕೂಡ ನಮ್ಮ ಸಮಾಜಕ್ಕೆ, ವಿಜ್ಞಾನ ಕ್ಷೇತ್ರಕ್ಕಷ್ಟೇ ಕೊಡುಗೆ ನೀಡೋಣ ಎಂದು ಆಶಿಸುತ್ತೇನೆ. ಸಂದರ್ಭದಲ್ಲಿ ಮೇರಿ ಕ್ಯೂರಿಯವರ ಮಾತೊಂದನ್ನು ನೆನೆಯುತ್ತಾ ಅವರ ಮಾರ್ಗದಲ್ಲಿ ನಡೆಯೋಣ.



“Nothing in life is to be feared, it is only to be understood. Now is the time to understand more, so that we may fear less,”

              ಲೇಖಕ: ಗುರು ಪ್ರಸಾದ್

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?