ನಮ್ಮ ಬಗ್ಗೆ

ವಿಜ್ಞಾನವೆಂದರೆ ಸುತ್ತಮುತ್ತಲಿನ ಆಗು-ಹೊಗುವುದನ್ನು ತಿಳಿದುಕೊಳ್ಳುವುದು. ಒಂದೊಂದು ಕ್ಷಣದಲ್ಲಿಯು ಪ್ರಕೃತಿಯಲ್ಲಿ ನಾವು ಹೊಸತ್ತನ್ನು ನೊಡಬಹುದು . ನಮಗೆ ವಿಜ್ಞಾನದ ಮಾಹಿತಿಯನ್ನು ಅಥವಾ ಚಿತ್ರಗಳು ಬೇಕೆಂದರೆ ಗ್ರಂಥಾಲಯ ಅಥವಾ ಗೂಗಲ್ನಲ್ಲಿ ಪಡೆದುಕೊಳ್ಳಬಹುದು. ಆದರೆ, ವಿಜ್ಞಾನವನ್ನು ಪ್ರಯೋಗಗಳ್ಳನ್ನು ಮಾಡಿ ಕಲಿಯಬೇಕು. ಪ್ರಯೋಗಗಳನ್ನು ಮಾಡಲು ದೊಡ್ಡ ಪ್ರಯೊಗಾಲಯ ಬೇಡ, ಉತ್ತಮ ವಿಕ್ಷಣಾ ಕೌಶಲ್ಯ ಮತ್ತು ಕುತೂಹಲ ಬೇಕು. ಕುತೂಹಲವಿಲ್ಲದಿದ್ದರೆ ವಿಜ್ಞಾನವನ್ನು ತಿಳಿಯಲು ಸಾದ್ಯವಿಲ್ಲ. ಈ ವಿಚಾರಗಳನ್ನು ಉದ್ದೇಶವನ್ನಾಗಿ ಇಟ್ಟುಕೊಂಡು ನಾವು “ವಿಜ್ಞಾನ ಸಂತೆ” ಎಂಬ ಉಚಿತ ವೆಬ್ಸೈಟ್ ಅನ್ನು ರಚಿಸಿದ್ದೆವೆ.
ನೀವು ಯಾವಾಗಾದರೂ ಹಳ್ಳಿಯಲ್ಲಿ ಸಂತೆಗೆ ಭೇಟಿ ನೀಡ್ಡಿದ್ದೀರ? ಹಳ್ಳಿಯಲ್ಲಿ ಸಂತೆಯನ್ನು ವಾರಕೋಮ್ಮೆ ಆಯೋಜಿಸಲಾಗುತ್ತದೆ. ಸಂತೆಯಲ್ಲಿ ಹೊಸದಾದ ಮತ್ತು ಆಸಕ್ತಿಕಾರಕ ವಸ್ತುವನ್ನು ಮಾರಲಾಗುವುದು ಮತ್ತು ಮಕ್ಕಳು, ಜನರು ಕುತೂಹಲದಿಂದ ವಸ್ತುವನ್ನು ಖರೀದಸಲು ಮತ್ತು ನೋಡಲು ಇಚ್ಛಿಸುತ್ತಾರೆ. ಅದೇ ರೀತಿ, ನಮ್ಮ ವೆಬ್ಸೈಟ್ ನಲ್ಲಿ ವಿಜ್ಞಾನವನ್ನು ಹೊಸತು ಮತ್ತು ಕುತೂಹಲಕಾರಿಯಾಗಿ ಕಲಿಯಬಹುದು. ಈ ವೆಬ್ಸೈಟ್ ನ್ನು ಮುಖ್ಯವಾಗಿ ಗ್ರಾಮೀಣಾ ಶಾಲೆಯ ಮಕ್ಕಳ್ಳನ್ನು ವಿಜ್ಞಾನದೆಡೆಗೆ ಆಕರ್ಷಿಸಲು ಮತ್ತು ಇಂಟರ್ನೆಟ್ ಬಳಿಕೆಯನ್ನು ಪ್ರೋತ್ಸಾಹಿಸಲು ರಚಿಸಿದ್ದೇವೆ. ನಮ್ಮ ವೆಬ್ಸೈಟ್ ದ್ವಿಭಾಷೆಗಳಲ್ಲಿ ಲಭ್ಯವಿದೆ (ಕನ್ನಡ ಮತ್ತು ಇಂಗ್ಲೀಷ್). ಇದರಿಂದ ವಿದ್ಯಾರ್ಥಿಗಳಿಗೆ ಎರಡು ಭಾಷೆಗಳಲ್ಲಿಯೂ ಲೇಖನವನ್ನು ಓದಲು ಉಪಯುಕ್ತವಾಗಿದೆ. ನಮ್ಮ ವೆಬ್ಸೈಟ್ ನಲ್ಲಿ “ವಿದ್ಯಾರ್ಥಿ ಸಂತೆ” ಎಂಬ ಪ್ರತ್ಯೇಕ ವಿಭಾಗವಿದೆ. ಇಲ್ಲಿ ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವವನ್ನು ಪ್ರೇರಿಸುವ ಚಿತ್ರಗಳು ಮತ್ತು ಲೇಖನಗಳ್ಳನ್ನು ಪ್ರಕಟಿಸಲಾಗುವುದು. ವಿಜ್ಞಾನವನ್ನು ರಚನಾತ್ಮಕವಾಗಿ ಕಲಿಯಬೇಕಾದರೆ ಕಲ್ಪನೆ, ನವೀನತೆ ಮತ್ತು ಆಸಕ್ತಿ ಇರಬೇಕು.
ಮೂಲಭೂತವಾಗಿ, ನಮ್ಮ ವೆಬ್ಸೈಟ್ ವಿದ್ಯಾರ್ಥಿ ಪ್ರಭುತ್ವ:- ವಿದ್ಯಾರ್ಥಿಯಿಂದ, ವಿದ್ಯಾರ್ಥಿಗೆ, ವಿದ್ಯಾರ್ಥಿಗೋಸ್ಕರ.
ವಿಜ್ಞಾನ ಸಂತೆಯು Blackbody Science Group‘ನ ಯೋಜನೆಯಾಗಿದೆ. Blackbody Science Group (Which Absorbs All Wavelength of Intuitive Minds)ಲಾಭ ರಹಿತ ಸಂಸ್ಥೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಾವು ವಿಜ್ಞಾನವನ್ನು ಆಕರ್ಷಕ ಮತ್ತು ಕತೂಹಲಕಾರಿ ಯೋಜನೆಗಳಿಂದ ಶಾಲಾ ಮಕ್ಳಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುತ್ತಿದ್ದೆವೆ.
ನಮ್ಮ ಕೆಲವು ವಿಶಿಷ್ಟ ಯೋಜನೆಗಳೆಂದರೆ:
೧.Science On Sunday.
೨.ಯುರೇಕ ವಿಜ್ಞಾನ ಸಮ್ಮೇಳನ
ಹೆಚ್ಚಿನ ಮಾಹಿತಿಗಾಗಿ ಲಿಂಕಿಗೆ ಭೇಟಿ ನೀಡಿ: www.blackbodysciencegroup21.webs.com

               “ನಮ್ಮ ಗುರಿ ಪರ್ವತ ಮುಟ್ಟುವುದು ಮತ್ತು ಆಲೋಚನೆ ಸಮುದ್ರದಾಳದಷ್ಟು.”

Comments

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?