ಉದ್ದ ಅಳತೆಗಳ ಮೂಲಮಾನ


                          ಚಿತ್ರಿ:ಶಶಾಂಕ್ ಭಾರದ್ವಾಜ್
ಇದೀಗ ೧೬೭೬ನೇ ವರ್ಷ.ಒಬ್ಬ ಮೂರ್ಖ ಹಾಗೂ ಮೊಂಡ ರಾಜ ರಾಜ್ಯವನ್ನು ಆಳುತ್ತಿದ್ದನು.ರಾಜನ ಮೂರ್ಖ ಕಾನೂನುಗಳು ಸಂಪೂರ್ಣ ರಾಜ್ಯವನ್ನು ಅವ್ಯವಸ್ಥೆ ಹಾಗೂ ಬಡತನದೆಡೆಗೆ ವೇಗವಾಗಿ  ಕೊಂಡುಯ್ಯುತ್ತಿತ್ತು  .
ಯಾವ ಕುಟುಂಬವು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲವೋ ಅವರು ಪ್ರತಿ ತಿಂಗಳೂ ೫ ಬಂಗಾರದ ನಾಣ್ಯಗಳನ್ನು ಅಧಿಕ ಬಹುಮಾನವಾಗಿ ಪಡೆಯುತ್ತಾರೆ ಎಂಬುದು ರಾಜನ ವಿಚಿತ್ರ ಕಾನೂನುಗಳಲ್ಲೊಂದಾಗಿತ್ತು.ಈ ಹುಚ್ಚು ಉಪಾಯವು ಸ್ಪಷ್ಟವಾಗಿ ಅವನ ಚಿಕ್ಕಂದಿನ ವಿದ್ಯಾಭ್ಯಾಸದ ಸಮಯದಲ್ಲಿನ ಅಸಹ್ಯ ಅನುಭವದಿಂದಲೇ ಬಂದಿತ್ತು.   ಇಂತಹ ಉಪಕಾರಿ ಕಾನೂನಿಗೆ ರಾಜ್ಯದ ಜನರು ಮಾತನಾಡುತ್ತಿರಲಿಲ್ಲ ಆದರೆ ಅವರು ಭಯಪಡುತ್ತಿದ್ದ ಅತಿಯಾದ ಬಡತನದಿಂದಾಗಿ ಅವರು ರೋಸಿಹೋಗಿದ್ದರು. ಆ ೫ ಬಂಗಾರದ ನಾಣ್ಯಗಳೇ ಅವರ ಜೀವನೋಪಾಯವಾಗಿತ್ತು ಮತ್ತು ಮಕ್ಕಳ ದೃಷ್ಟಿಯಲ್ಲಂತೂ ಆ ಪರೋಪಕಾರಿ ರಾಜನ ಆಳ್ವಿಕೆಯು ಅತ್ಯಂತ ಸಂತೋಷದಾಯಕವಾಗಿತ್ತು!
ಇಂತಹ ಮರುಳಬುದ್ಧಿಯ ರಾಜನ  ಅರಮನೆಯಲ್ಲಿ ನೀನು "  ವಿಜ್ಞಾನ ಅಭಿವೃದ್ಧಿ ಇಲಾಖೆ"ಯ ಮಂತ್ರಿಯಾಗಿದ್ದೆ.ನಿನಗೆ ಸಹಜವಾಗಿ ಅಲ್ಲಿ ಕಡಿಮೆ ಪಾತ್ರವಿತ್ತು.ಮಕ್ಕಳು ಶಾಲೆಗೆ ಹಾಜರಾಗುವುದನ್ನೇ ನಿಷೇಧಿಸಿದ್ದಾಗ ಯಾವ  ವಿಜ್ಞಾನ ತಾನೇ ಅಭಿವೃದ್ಧಿಗೊಳ್ಳುತ್ತದೆ!
ಇದೇ ಹಿಂದಿನ ವಾರ ತಾನೇ ರಾಜ್ಯದ ಪ್ರಖ್ಯಾತ ತತ್ವಜ್ಞಾನಿಯೊಬ್ಬ ಅನುಲೇಪಿತ ಬೆಳ್ಳಿಯ ಗಟ್ಟಿಯೊಂದನ್ನು  ರಾಜನ ಹತ್ತಿರ ಕೊಂಡೊಯ್ದು ಅದರ ತೂಕವನ್ನು ತೂಕದ ಅಳತೆಯ ಮೂಲಮಾನವಾಗಿ ಪರಿಚಯಿಸುತ್ತಾ ಅದನ್ನು ಇನ್ನೂ ಮುಂದೆ ಎಚ್ಚರಿಕೆಯಿಂದ ಅರಮನೆಯಲ್ಲಿ ಸಂರಕ್ಷಿಸಿಡುವಂತೆ ಕೋರಿಕೊಳ್ಳುತ್ತಾನೆ.ಅವನು ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ತೂಕದಲ್ಲಾಗುವ ಮೋಸವನ್ನು ತಡೆಯಲು ಅಳತೆಯ ಮೂಲಮಾನವೊಂದು ಅವಶ್ಯಕವಿದೆ ಎಂದು ಅತ್ಯುತ್ತಮವಾಗಿ ಪ್ರತಿಪಾದಿಸಿದ.ಆದರೆ ರಾಜನಿಗೆ ಅದು ಸರಳವಾಗಿ ಅರ್ಥವಾಗಲೇ ಇಲ್ಲ ಮತ್ತು ಆ ತತ್ವಜ್ಞಾನಿಯ ಚಿಂತನೆಗೆ ಒಪ್ಪಿಗೆ ಸೂಚಿಸಲು ಬಯಸುತ್ತಿರಲಿಲ್ಲ.ದೊಡ್ಡ ವಾಗ್ವಾದದ ನಂತರ ರಾಜನು ಅಳತೆಯ ಮೂಲಮಾನವನ್ನು ಪರಿಚಯಿಸಲು ಒಪ್ಪಿದನು ಆದರೆ  ತತ್ವಜ್ಞಾನಿ ತಂದ ಬೆಳ್ಳಿಯ ಗಟ್ಟಿಯ ಬದಲಾಗಿ ಅವನದೇ ತೂಕವನ್ನು ಪರಿಚಯಿಸಿದನು.ರಾಜನ ತೂಕವು ದಿನದಿಂದ ದಿನಕ್ಕೆ ಬದಲಾಗುವ ಕಾರಣ ಅದನ್ನು ತೂಕದ ಮಾನವಾಗಿ ಬಳಸುವುದು ವಿಚಿತ್ರ ಯೋಚನೆ ಎಂದು ತತ್ವಜ್ಞಾನಿ ಸೂಚಿಸಿದನು.ರಾಜನು ಈ ಅಪಮಾನವನ್ನು ಸಹಿಸಲಾರದೆ ಆ ಬಡ ತತ್ವಜ್ಞಾನಿಯ ಮರಣದಂಡನೆಗೆ   ಅಜ್ಞಾಪಿಸಿದನು.ಆದರ ಜೊತೆಯಲ್ಲೇ ರಾಜಧಾನಿಯ ಎಲ್ಲೆಡೆಯಲ್ಲಿನ ಮೋಸ ಮತ್ತು ಅನುಮಾನವನ್ನು ಬಗೆಹರಿಸುತ್ತಿದ್ದ ತೂಕದ ಅಳತೆಯ ಮೂಲಮಾನವನ್ನು ಪ್ರಮಾಣೀಕರಿಸುವ ಅಭೂತಪೂರ್ವ ಉಪಾಯಕ್ಕೆ ಅಂತ್ಯ ಹಾಡುವುದರ ಜೊತೆಗೆ ಆ ಮೇಧಾವಿಯ ಎಲ್ಲಾ ಚಿಂತನೆಗಳನ್ನೂ ಬರಿದಾಗಿಸುತ್ತಾನೆ.
ರಾಜನ ಜನವಿರೋಧಿ ಹಾಗೂ  ವಿಜ್ಞಾನ ವಿರೋಧಿ ನಿರಂಕುಶ ಪ್ರಭುತ್ವ ಇಂತಹದ್ದು!
ಹೀಗೇ ಯಾವುದೋ ಒಂದು  ದಿನ  ರಾಜ ದರ್ಬಾರಿನಲ್ಲಿ ನೀನು ಉಳಿದ ಮಂತ್ರಿಗಳೊಡನೆ ನಿನ್ನ ಸಹಜ ಆಸನದಲ್ಲಿ ರಾಜನ ಬರುವಿಕೆಗಾಗಿ ಕಾದು ಕುಳಿತಿರುವೆ.ಅನಿರೀಕ್ಷಿತವಾಗಿ ರಾಜನು ಆಗಮಿಸಿದಾಗ ಅವನ ನಡಿಗೆಯಲ್ಲಿನ ಪ್ರತಿಷ್ಟೆಯು ಅವನ ಪ್ರತಿಯೊಂದು ಅಭಿನಯದಿಂದಲೇ ತೋರುತ್ತಿತ್ತು.ಎಲ್ಲಾ ಮಂತ್ರಿಗಳೂ ತಲೆಬಾಗಿ ವಂದಿಸಿದರು ಮತ್ತು ರಾಜನು ತನ್ನ     ಸಿಂಹಾಸನದಲ್ಲಿ ಆಸೀನನಾಗುತ್ತಿದ್ದ ಹಾಗೆ ನಂತರ ಅವರೂ ಆಸೀನರಾದರು.ಈಗ ನೀನು ನೋಡುತ್ತಿರುವುದು ರಾಜನ ಅರಮನೆಯ ಸುತ್ತ ಎತ್ತರವಾದ ಗೋಡೆಯೊಂದನ್ನು ಕಟ್ಟುವ  ವಿಷಯವನ್ನು ಕುರಿತು ಚರ್ಚೆ ಮಾಡಲೆಂದು ಬಂದ ತಂತ್ರಜ್ಞಾನಿಯೊಬ್ಬ ಮತ್ತು ರಾಜನ ಮುಖಾಮುಖಿಯ ದೃಶ್ಯ. ಅರಮನೆಯ ಸುತ್ತಲು ಇರುವ ಗೋಡೆಯನ್ನು ಉರುಳಿಸಿ ಇನ್ನೂ ಎತ್ತರವಾದ ಗೋಡೆಯೊಂದನ್ನು ಕಟ್ಟಿಸುವ ಹುಚ್ಚು-ಮನುಷ್ಯನ ತವಕ ರಾಜನ ಮತ್ತೊಂದು ವಿಚಿತ್ರ ಆಲೋಚನೆಗಳಲ್ಲೊಂದು.
Image source:NPL
ತಂತ್ರಜ್ಞಾನಿಯು ಹೊಸ ಗೋಡೆಯ ದಪ್ಪ,ಎತ್ತರ ಇತ್ಯಾದಿಗಳ ಕುರಿತ ಯೋಜನೆಯನ್ನು ವಿವರಿಸುತ್ತಿರುವಂತೆಯೇ ತಕ್ಷಣ ರಾಜನು ತಂತ್ರಜ್ಞಾನದಲ್ಲಿ ಅವನು ಗೋಡೆಯ ಎತ್ತರವನ್ನು ಅಳೆಯಲು ಹೇಗೆ ಯೋಜನೆಯನ್ನು ರೂಪಿಸಿಕೊಂಡಿದ್ದಾನೆ ಎಂಬುದಾಗಿ ಕೇಳುತ್ತಾನೆ(ಬಹುಷಃ ದಿವಂಗತ  ತಂತ್ರಜ್ಞಾನಿಯ ಅಳತೆಯ ಮೂಲಮಾನದ ಕುರಿತಾದ ಪ್ರತಿಪಾದನೆಯನ್ನು ನೆನಪಿಸುತ್ತದೆ).ತುಂಬಾ ಸಮಯದಿಂದ ಬಳಸುತ್ತಿದ್ದ ಉದ್ದದ ಅಳತೆಗೋಲೊಂದನ್ನು,ಅದು ಪ್ರಮಾಣಿಕೃತ ಅಳತೆಮಾಡುತ್ತದೆ  ಎಂದು ರಾಜನಿಗೆ ವಿವರಿಸುತ್ತಾನೆ.ಪುನಃ ರಾಜನು ತನ್ನನ್ನೇ ಪ್ರಮಾಣೀಕೃತ ಮಾನವನ್ನಾಗಿ ಬಳಸಬೇಕೆಂದು ಹಾಗೂ ಒಂದು ಮೀಟರನ್ನು ತನ್ನ ಮೂಗು ಮತ್ತು ಹೊರಬಿಚ್ಚಿದ ಕೈನ ತೋರು ಬೆರಳಿನ ತುದಿಗಿರುವ ಉದ್ದವನ್ನಾಗಿ ಪುನರ್ ವ್ಯಾಖ್ಯಾನಿಸಬೇಕಾಗಿ ತಂತ್ರಜ್ಞಾನನಲ್ಲಿ ಕೇಳಿದನು."ಇದು ಮೂರ್ಖಶಿಖಾಮಣಿಯ ಮತ್ತೊಂದು ಮುಠ್ಠಾಳ ಚಿಂತನೆ", ಎಂದು ನೀನು ನಿನ್ನಲ್ಲೇ ಗೊಣಗುವೆ.ತದ ನಂತರ ನಿನ್ನನ್ನು ಎಚ್ಚೆರಿಕೆಯಿಂದ ಅಳತೆ ಮಾಡಲೆಂದು ರಾಜನು ಕರೆಯುತ್ತಾನೆ.(ವಿಜ್ಞಾನ ಅಭಿವೃದ್ದಿ ಮಂತ್ರಿಯೇ ವಿಜ್ಞಾನದ ಹಿನ್ನೆಡೆಗೆ ಸಹಕರಿಸದಿದ್ದರೆ ಹೇಗೆ ತಾನೇ ಮೂರ್ಖ ಕಾಯ್ದೆ ಪೂರ್ಣಗೊಂಡಿತು!)ನೀನು ಆಗ ಧೈರ್ಯಹೀನನಾದೆ. ನಿನಗೆ ಮೊದಲೇ   ತತ್ವಜ್ಞಾನಿಯೊಬ್ಬನನ್ನು ಹಿಂದಿನ ವಾರವಷ್ಟೇ ನೇಣುಹಾಕಿದುದರ ಬಗ್ಗೆ ದೂರಾಲೋಚನೆ ಇತ್ತು.ನಿನಗೆ ಸ್ವಲ್ಪವೂ ಹಿಂಸೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟವಿರಲಿಲ್ಲ.ನೀನು ಅವನು ಹೇಳಿದಂತೆ ಮಾಡುವೆ,ರಾಜನ ಹತ್ತಿರ ಹೋದೆ ಹಾಗೂ ಒಂದು ದಾರದ ಸಹಾಯದಿಂದ ಅವನ ಮೂಗಿನಿಂದ ಅವನಿಗೆಷ್ಟು ಉದ್ದ ಕೈಚಾಚಲು ಸಾಧ್ಯವೋ  ಅಲ್ಲಿಯ ತನಕ ಚಾಚಿದ ಕೈನ ತೋರು ಬೆರಳಿನ ತುದಿಯವರೆಗೆ ಅಳೆತೆ ಮಾಡಿದೆ.ಖಂಡಿತವಾಗಿಯೂ ರಾಜನು ತನ್ನ ಕೈಯನ್ನು ಸ್ವಲ್ಪ ಜಾಸ್ತಿ  ಅಥವಾ ಸ್ವಲ್ಪ ಕಡಿಮೆ ಹೊರ ಚಾಚಿದಲ್ಲಿ ಮೀಟರ್ ನ ಉದ್ದದ ಅಳತೆಯು ಬೇರೆಯೇ ಆಗಿರುತ್ತಿತ್ತು.ಆದರೆ  ಏನೇನೋ ಮಾತನಾಡಿ ನಿನ್ನನ್ನು ನೀನೇ ನೇಣಿನ ಕುಣಿಕೆಯ ಹತ್ತಿರ ಕೊಂಡೊಯ್ಯುವ ಬದಲು ನೀನು ಸುಮ್ಮನೆ ಅಳತೆಯನ್ನು ಮಾಡಿದೆ ಮತ್ತು ನಿನ್ನ ಆಸನದೆಡೆಗೆ ಪುನಃ ನಡೆದೆ.
ಅರಮನೆಯ ಗೋಡೆಯ ನಿರ್ಮಾಣಕ್ಕೋಸ್ಕರವಾಗಿಯೇ ಹೊಸ ಪ್ರಮಾಣೀಕರಿಸಿದ "ಮೀಟರ್" ಎಂಬ ಉದ್ದವನ್ನು ಅಳೆಯಲು ಹೊಸ ಕೋಲುಗಳನ್ನು ತಯಾರುಮಾಡಲಾಯಿತು.(ಇದರಿಂದಾಗಿ ಅಲ್ಲಿಂದಾಚೆಗೆ ರಾಜ್ಯದಲ್ಲಿನ ಯಾವುದೇ ಅಳತೆಗಳಿಗೂ ಸಹ....).ಅನಿಶ್ಚಿತ ಅಥವಾ ಅಹಂ ಭಾವದ ರಾಜನ ಉದ್ದದ ಮೂಲಮಾನಗಳ ಚಿಂತನೆಯು ಹೇಗೇ ಇದ್ದರೂ ಒಂದು ಒಪ್ಪಲೇಬೇಕಾದ ವಿಷಯವೆಂದರೆ ಅಳತೆಯ ಮೂಲಮಾನಗಳ ಅವಶ್ಯಕತೆಯ ಕುರಿತು ರಾಜನಿಗೆ ಅರಿವಾದದ್ದು ಮತ್ತು ಒಂದು ಮೀಟರ್ ಉದ್ದ ಎಂದರೆ ರಾಜನ ಮೂಗಿನ ತುದಿಯಿಂದ ಹೊರಚಾಚಿದ ಕೈನ ತೋರುಬೆರಳಿಗಿರುವ ದೂರವೆಂದು ಹೇಳಿದ್ದು ಸ್ವಲ್ಪ ಸೂಕ್ತ ಹಾಗೂ ಉಚಿತವಾದ ಆಯ್ಕೆಯೇ ಆಗಿತ್ತು.ಸ್ವಲ್ಪ ಯೋಚಿಸಿ,ರಾಜನೇನಾದರೂ ಉದ್ದದ ಮೂಲಮಾನವನ್ನು ತನ್ನ ಕಿರುಬೆರಳಿನ ಉದ್ದವನ್ನಾಗಿ ವ್ಯಾಖ್ಯಾನಿಸಿದ್ದರೆ ರಾಜ್ಯದ ತಂತ್ರಜ್ಞಾನರ ಪರಿಸ್ಥಿತಿ ಎಷ್ಟು ಪ್ರಯಾಸಕರವಾಗಿತ್ತು! ನಂತರ ಎರಡು ಸ್ಥಳಗಳ ನಡುವಿನ ದೂರವನ್ನು  ಕಿಲೋಮೀಟರ್ ಗಳ ಬದಲು ಎಷ್ಟೆಷ್ಟೋ ದಶಲಕ್ಷದಷ್ಟು ಕಿರುಬೆರಳುಗಳಲ್ಲಿ  ಅಳೆಯ ಬೇಕಾಗಿದ್ದೀತು!
Image source:Wikimedia commons,"Metre alloy"
ಈ ಉದ್ದದ ಮೂಲಮಾನವನ್ನು ವ್ಯಾಖ್ಯಾನಿಸುವ ರಾಜನ ಕಥೆಯು ಸಂಪೂರ್ಣ ಕಾಲ್ಪನಿಕವಲ್ಲ,ಕ್ರಿ.ಶ.೧೧೨೦ರಲ್ಲಿ ಇಂಗ್ಲೆಂಡಿನ ರಾಜನೊಬ್ಬ ಉದ್ದದ ಮೂಲಮಾನವನ್ನು "ಯಾರ್ಡ್" ಎಂಬುದಾಗಿಯೂ ಅದನ್ನು ತನ್ನ ಮೂಗಿನ ತುದಿ ಮತ್ತು ಹೊರಚಾಚಿದ ತೋಳಿನ ನಡುವಿನ ಅಂತರವೆಂಬುದಾಗಿಯೂ ವ್ಯಾಖ್ಯಾನಿಸಿದ್ದ. ಇಂತಹ ಭಯಂಕರ ಘಟನೆಗಳು ಅಳತೆಯ ಮೂಲಮಾನದ ಇತಿಹಾಸದಲ್ಲಿ ನಿಜವಾಗಿಯೂ ನಡೆದಿತ್ತು.ಆದರೆ ಕ್ರಿ.ಶ.೧೭೯೯ರಲ್ಲಿ ಫ಼್ರಾನ್ಸ್ ದೇಶದಲ್ಲಿ "ಮೀಟರ್" ಅತಿವೈಜ್ಞಾನಿಕ ವ್ಯಾಖ್ಯಾನವೊಂದನ್ನು ಸ್ವೀಕಾರಮಾಡಲಾಗಿತ್ತು.ಈ ವ್ಯವಸ್ಥೆಯ ಪ್ರಕಾರ ಒಂದು "ಮೀಟರ್"ನನ್ನು ಭೂಮಿಯ ಸಮಭಾಜಕ  ವೃತ್ತದಿಂದ ರೇಖಾಂಶದ ಮೇರೆಯಾಗಿ ಉತ್ತರ   ಧ್ರುವದವರೆಗಿನ ದೂರದ ಹತ್ತು ದಶಲಕ್ಷನೇಯ ಒಂದು(೧/೧೦ದಶಲಕ್ಷ)ಭಾಗ ಎಂಬುದಾಗಿ ವ್ಯಾಖ್ಯಾನಿಸಲಾಗಿತ್ತು.ಅದು ಹೇಗೆಂದರೆ ಒಬ್ಬನು ರೇಖಾಂಶದ ಮೇರೆಯಾಗಿ ಸಮಭಾಜಕವ್ರತ್ತ ಮತ್ತು ಉತ್ತರಧ್ರುವದ ನಡುವಿನ ದೂರವನ್ನು ಕಂಡುಹಿಡಿದರೆ ಅದು ಹತ್ತು ದಶಲಕ್ಷ ಮೀಟರ್ ಗಳಷ್ಟಿರಬಹುದು.ಫ಼್ರಾನ್ಸ್ ದೇಶದಲ್ಲಿ ಈ ವ್ಯಾಖ್ಯಾನದ ಜೊತೆಗೆ ’ಪ್ಲಾಟಿನಮ್’ ದಂಡವೊಂದರ ಮೇಲೆ ಒಂದು "ಮೀಟರ್" ದೂರದಲ್ಲಿ ಎರಡು ಗೀರು ಗುರುತುಗಳನ್ನು ಮಾಡಿ ನಿಯಂತ್ರಿತ ವ್ಯವಸ್ಥೆಯಲ್ಲಿ ಸಂರಕ್ಷಿಸಿಡಲಾಗಿದೆ.
Image source:wikimedia
ಕ್ರಿ.ಶ.೧೯೮೩ರವರೆಗೆ ವಿಜ್ಞಾನಿಗಳಿಗೆ ಈ ವ್ಯಾಖ್ಯಾನವು ಪ್ರಯೋಗಗಳಿಗೆ ಅವಶ್ಯವಾಗುವಷ್ಟು ನಿಖರವಾಗಿಲ್ಲ ಎಂಬುದು   ಅರಿವಾಗುವ ತನಕ ಇದೇ ಪ್ರಮಾಣೀಕ್ರತ ಉದ್ದದ ಮೂಲಮಾನವಾಗಿತ್ತು.ಉದಾಹರಣೆಗೆ,ಆ ದಂಡದ ಮೇಲಿನ ಗೀರುಗಳು ನಿಜವಾಗಿಯೂ ಎಷ್ಟು ದಪ್ಪನೇಯದಾಗಿದ್ದವು ಎಂಬುದರ ಮೇಲೆಯೇ ಅವಲಂಬಿತವಾಗಿದ್ದ ಪ್ರಯೋಗಗಳೂ ಅಲ್ಲಿದ್ದವು!ಅಲ್ಲಿ ಇನ್ನೂ ಹೆಚ್ಚು ನಿಖರವಾದ "ಮೀಟರ್" ನ ವ್ಯಾಖ್ಯಾನದ ಅವಶ್ಯಕತೆ ಬಂತು.ಆದ    ಕಾರಣ "ಮೀಟರ್" ಎಂಬುದನ್ನು ೧/೨೯೯೭೯೨೪೫೮ ಸೆಕೆಂಡುಗಳಲ್ಲಿ ಬೆಳಕು ಚಲಿಸುವ ದೂರ ಎಂದು ಪುನರ್ ವ್ಯಾಖ್ಯಾನ ಮಾಡಲಾಯಿತು.(ಅದು ನೀನು ಒಂದು ದೊಡ್ಡ ತುಂಡೊಂದನ್ನು ತೆಗೆದುಕೊಂಡು ಒಂದು ಸೆಕೆಂಡಿನಲ್ಲಿ ಅದನ್ನು ೨೨೯೭೯೨೪೫೮ ಚಿಕ್ಕ ಚಿಕ್ಕ ತುಣುಕುಗಳಾಗಿ ಕತ್ತರಿಸಿದರೆ ಆ ದೊಡ್ಡ ತುಂಡಿನ ಉದ್ದಕ್ಕೆ ಸಮವಾಗಿರುತ್ತದೆ.)ಇದು ಮೊದಮೊದಲು ಹಿಂದೆ ಸ್ವೀಕರಿಸಿದ್ದ ಅಯೋಗ್ಯ ರಾಜನ ಕಿರುಬೆರಳಿಗಿಂತಲೂ  ಅತಿ ಚಿಕ್ಕ ಆಧಾರದಂತೆ ತೋರಬಹುದು; ಆದರೆ ನಿನಗೇನಾದರೂ ಬೆಳಕು ನಂಬಲಾಗದಷ್ಟು,ಸುಮಾರು ಗಂಟೆಗೆ ದಶಕೋಟಿ ಕಿಲೋಮೀಟರ್  ಗಳಷ್ಟು ವೇಗದಲ್ಲಿ ಚಲಿಸುತ್ತದೆ ಎಂಬುದು ತಿಳಿದಲ್ಲಿ ನಿನಗೆ ಈ ವ್ಯಾಖ್ಯಾನದ ಸ್ಪಷ್ಟತೆ ಅರಿವಾಗಬಹುದು.ವಾಸ್ತವದಲ್ಲಿ ಈ  ಒಂದು "ಮೀಟರ್" ನ ಉದ್ದವು ನೀನು ದಾಪುಗಾಲು ಹಾಕಿ ನಡೆಯುವಾಗ ಒಂದು ಹೆಜ್ಜೆಯಲ್ಲಿ ಕ್ರಮಿಸುವ ದೂರದಷ್ಟಿರುತ್ತದೆ.

ಇಲ್ಲಿ ನಾವು ತಿಳಿದಿಕೊಂಡಿದ್ದು ಕೇವಲ ಉದ್ದದ ಅಳತೆಯ ಮೂಲಮಾನದ ಅವಶ್ಯಕತೆಯೊಂದೇ ಅಲ್ಲ ಜೊತೆಯಲ್ಲೇ ಸ್ಪಷ್ಟವಾದ ಹಾಗೂ ಅತ್ಯಂತ ನಿಖರವಾದ ಮೂಲಮಾನದ ವ್ಯಾಖ್ಯಾನದ ಅವಶ್ಯಕತೆ. 


ಮೂಲ ಲೇಖಕ:ರೋಶನ್
 
ಅನುವಾದ:ದಿನೇಶ್ ಹೆಗ್ಡೆ

 

Comments

Popular posts from this blog

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?