Posts

Showing posts from December, 2015

ಭೌತಶಾಸ್ತ್ರ ಏಂದರೇನು?

Image
Image Source: Wikipedia . ಭೌತಶಾಸ್ತ್ರ ಏಂದರೇನು? ನೀವು ‘ಭೌತಶಾಸ್ತ್ರ’ವನ್ನು ಕಲಿಯಲು ಹೆದರುತ್ತೀರಾ?  ಭೌತಶಾಸ್ತ್ರದ ಲ್ಲಿನ ಸಮೀಕರಣಗಳು (equations)ನಿಮ್ಮ ಆಲೋಚನೆಗಳನ್ನು ಒಮ್ಮೆಲೆ ಸ್ತಬ್ಧಗೊಳಿಸಬಿಡುಿ ತ್ತವೆಯೆ? – ಈ ಲೇಖನವು ನಿಮ್ಮ ಚಿಂತೆಗಳನ್ನು ದೂರಮಾಡುತ್ತದೆ.  ನೀವು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದಿರುವುದೇ ನೀವು ಭೌತಶಾಸ್ತ್ರವನ್ನು ಕಲಿಯಲು ಹೆದರುತ್ತಿರುವುದಕ್ಕೆ ಕಾರಣವಾಗಿರುತ್ತದೆ. ನೀವು ಇದಕ್ಕೆ ಬಹಳಷ್ಟು ಕಾರಣಗಳನ್ನು ನೀಡಬಹುದು.  ಆದರೆ, ಸಮಸ್ಯೆ ಇರುವುದೇ ನಿಮ್ಮಲ್ಲಿ.  ಈಗ ಪಠ್ಯಪುಸ್ತಕದಲ್ಲಿರುವಂತೆ ಭೌತಶಾಸ್ತ್ರ ಎಂದರೆ ಏನು ಎಂಬ ವಿವರಣೆಯನ್ನು (definition)) ನೋಡೋಣ.  “Physics”  ಪದವು ಗ್ರೀಕ್ ಭಾಷೆಯ “Fusis” ನಿಂದ ಬಂದಿರುವುದಾಗಿರುತ್ತದೆ.   “Fusis” ನ ಅರ್ಥ ಒಂದು ವಸ್ತುವಿನ “ಸ್ವರೂಪ ಅಥವಾ ಲಕ್ಷಣ” ಆಗಿರುತ್ತದೆ

ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು

Image
"ಮಂಗಳಯಾನ ತದನಂತರ! ಸಾಧ್ಯತೆಗಳು ಮತ್ತು ಸವಾಲುಗಳು" ಕಾಲದ ಅಸೀಮ ಪರಿಧಿಯನ್ನು ವಿವರಿಸುತ್ತಾ ಕವಿ ದ.ರಾ ಬೇಂದ್ರೆಯವರು "ತಿಂಗಳಿನೂರಿನ ನೀರನು ಹೀರಿ ಮಂಗಳ ಲೋಕದ ಅಂಗಳಕ್ಕೇರಿ ಹಕ್ಕಿ ಹಾರುತಿದೆ ನೋಡಿದಿರಾ!"ಎಂದು ಹಾಡಿದರು. ಕವಿ ಕಂಡ ಸತ್ಯ ಇಂದು ನನಸಾಗಿದೆ ಮಿತ್ರರೇ.ನಿಮಗೆಲ್ಲ ತಿಳಿದಂತೆ ನಮ್ಮ ಭಾರತ ಇಂದು ಮಂಗಳನ ಕಕ್ಷೆಯಲ್ಲಿ ತನ್ನದೇ ಆದ ವ್ಯೋಮನೌಕೆಯನ್ನು ಇರಿಸಿದೆ. . ಬಾಹ್ಯಾಕಾಶಚಿತ್ರ ಮೂಲ: ವಿಕಿಪೀಡಿಯ ಇದು ಅಂಗಾರಕನ ಕುರಿತು ಮನುಜನಿಗಿದ್ದ ಅಪ್ಯಾಯಮಾನವಾದ ಕುತೂಹಲದ ಒಂದು ನಿದರ್ಶನ.ಆದರೆ ಈ ಮನುಷ್ಯನ ಕುತೂಹಲಗಳಿಗೆಲ್ಲ ಉತ್ತರ ಹುಡುಕಲು ಬಾಹ್ಯಾಕಾಶ ಯುಗವೇ ಆರಂಭವಾಗಿ ಕ್ಯುರಿಯೊಸಿಟಿ ಎಂದು ಆಂಗ್ಲಾನುವಾದದ ’ಕುತೂಹಲ’ ಎಂಬ ಹೆಸರಿನ ರೋವರ್ಗಳು ಬಂದಾಯಿತು. 'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂಬ ಸಂದೇಶ ಕೊಟ್ಟಂತಾಗುತ್ತದೆ'.ಇಂಥ ಒಂದು ಮಹತ್ವಾಂಕ್ಷೆ ಇಸ್ರೋದ ವಿಜ್ಞಾನಿಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯಲು ಆರಂಭಿಸಿದ್ದು 'ಚಂದ್ರಯಾನ-1'ರ ಸಮಯದಲ್ಲಿ.ಭಾರತದ ಮಂಗಳನೌಕೆ (ಮಾಮ್‌– ಮಾರ್ಸ್‌ಆರ್ಬಿಟರ್‌ಮಿಷನ್‌( ಮೊತ್ತ ಮೊದಲ ಯತ್ನದಲ್ಲೇ ಮಂಗಳ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿ ಈಗ ನಿರುಮ್ಮಳವಾಗಿ ಆ ಗ್ರ