Posts

Showing posts from November, 2015

ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಮತ್ತು ಅದರ ಮಹತ್ವ

Image
ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಮತ್ತು ಅದರ ಮಹತ್ವ ಈ ವರ್ಷದ (೨೦೧೫) ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಪ್ರೊ. ಟಕಾಕಿ ಕಜಿಟ, ಟೋಕಿಯೋ ವಿಶ್ವವಿದ್ಯಾಲಯ, ಜಪಾನ್ ಹಾಗೂ ಪ್ರೊ. ಅರ್ತುರ್ ಮ್ಯಾಕ್ಡೊನಾಲ್ಡ್ , ಕ್ವೀನ್ಸ್ ವಿಶ್ವವಿದ್ಯಾಲಯ, ಕೆನಡ ಇವರಿಬ್ಬರಿಗೆ ದೊರಕಿದೆ. ಕಣ ವಿಜ್ಞಾನ / ಪಾರ್ಟಿಕಲ್ ಫಿಸಿಕ್ಸ್ ನಲ್ಲಿನ ಒಂದು ಪ್ರಮುಖ ಸಮಸ್ಯೆಗೆ ಸೂಕ್ತ ಪರಿಹಾರವನು ಸಂಶೋಧನೆ ಹಾಗೂ ಪ್ರಯೋಗಗಳಿಂದ ಪರಿಹರಿಸಿದ ಕಾರಣಕ್ಕೆ ಈ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಸ್ವೀಡನ್ನ ವಿಜ್ಞಾನ ಅಕಾಡೆಮಿಯು ೬/೧೦/೨೦೧೫ ರಂದು ಪ್ರೊ. ಟಕಾಕಿ ಹಾಗೂ ಪ್ರೊ. ಅರ್ತುರ್ ರವರ ಹೆಸರುಗಳನ್ನ ಅಧಿಕೃತವಾಗಿ ಘೋಷ್ಹಿಸುತ್ತಾ ‘ ನ್ಯೂಟ್ರಿನೊ ಪರಿವರ್ತನೆಯಾಗುತ್ತದೆ ಎನ್ನುವ ಮೂಲಕ ಅವುಗಳಿಗೆ ದ್ರವ್ಯರಾಶಿ (ಮಾಸ್) ಇದೇ’ ಎಂಬುದ ನ್ನು ಸಾಬೀತುಪಡಿಸಿದ ಕಾರಣಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿತು.