ಮಾಪನಗಳಲ್ಲಿ ಮೂಲಮಾನದ ಪ್ರಾಮುಖ್ಯತೆ.




ಮಾಪನಗಳಲ್ಲಿ ಮೂಲಮಾನದ ಪ್ರಾಮುಖ್ಯತೆ


ನೀವು ದಿನಸಿ ಅಂಗಡಿಗೆ ಹೋದಾಗ ಕೆ.ಜಿ  ಅಥವಾ ಲೀಟರ್ ಆನ್ನುವ ಪದಗಳನ್ನು ಉಪಯೋಗಿಸಿದ್ದೀರ ಅಲ್ವಾ?ನೀವು ಯಾವಗಲಾದರು ೧ ರವೆ ಅಥವಾ ೧ ದೀಪದ ಎಣ್ಣೆ ಕೊಡಿ ಎಂದು ಕೇಳಿದ್ದೀರ?
 ಒಂದು ವೇಳೆ ಹೀಗೆ ಕೇಳಿದರೆ ಅಂಗಡಿ ಮಾಲೀಕ ನಿಮ್ಮ ಮೇಲೆ ಒಂದು ವಿಚಿತ್ರ ನೋಟದಿಂದ ನೋಡಿರಬೇಕಲ್ಲ? ವಿಚಿತ್ರ ನೋಟದ ಕಾರಣ ಒಂದು ಕಾಲ್ಪನಿಕ ಘಟನೆ ಮೂಲಕ ತಿಳಿಯೋಣ. ನೀವು ಮೈಸೂರು ,ರೈಲು ನಿಲ್ದಾಣದಲ್ಲಿ ದೆಹಲಿಯಿ೦ದ ಬರುತ್ತಿರುವ ನಿಮ್ಮ ಆಪ್ತಮಿತ್ರನ ಸ್ವಾಗತಿಸಲು ಕಾಯುತ್ತಿದ್ದೀರಾ ಎಂದು ಕಲ್ಪಿಸಿಕೊಳ್ಳಿ. ನೀವು ನಿಮ್ಮ ಮಿತ್ರನನ್ನು ನೋಡಲು ನಿಮ್ಮ ಕಣ್ಣು ಕಾತುರದಿಂದ ದೆಹಲಿಯಿ೦ದ  ಬರುವ ರೈಲನ್ನು ಹುಡುಕುತ್ತಿದೆ. ರೈಲ್ವೆ ಪ್ಲಾಟ್ ಫಾರ್ಮ್ನಲ್ಲಿ ನಿಮ್ಮ ಮಿತ್ರನ ಸಿಹಿ ನೆನಪುಗಳನ್ನು ನೆನಪಿಸಿಕೊಂಡು ಪದೇ ಪದೇ ನಿಮ್ಮ ಕೈ ಗಡಿಯಾರವನ್ನು ನೋಡಿಕೊಳ್ಳುತ್ತ,ನಿಮ್ಮ ದೃಷ್ಟಿ ಸ್ವಲ್ಪ ದೂರದಲ್ಲಿದ್ದ ಟಿಕೇಟ್ ಕಲೆಕ್ಟರ್ ಮೇಲೆ ಬೀಳುತ್ತದೆ .ನೀವು ಟಿಕೇಟ್ ಕಲೆಕ್ಟರ್ ನ ಹತ್ತಿರ ಹೋಗಿ ದೆಹಲಿಯಿಂದ ಬರುವ ರೈಲು ಯಾವಾಗ ಬರುವುದೆಂದು ಕೇಳಿದಾಗ, ವ್ಯಸ್ತವಾಗಿದ್ದ ಟಿಕೇಟ್ ಕಲೆಕ್ಟರ್ ತನ್ನ ಎರಡು ಬೆರಳುಗಳನ್ನು ತೋರಿಸಿದ. ನೀವು ಥಟ್ ಅಂತ ಆ ಸನ್ನೆಯನ್ನು ಎರಡು ನಿಮಿಷಗಳೆಂದು ತಿಳಿದುಕೊಂಡು ಭಾವುಕರಾಗಿ ಮಿತ್ರನೊಂದಿಗೆ ಕಳೆದ ದಿನಗಳು,ಆಡಿದ ಆಟಗಳು ಮತ್ತು ಜೊತೆಗೂಡಿ ಮಾಡಿದ ಮೋಜನ್ನು ನೆನಪಿಸಿಕೊಳ್ಳುತ್ತಾ, ನಿಮ್ಮ ಕಣ್ಣು ಮತ್ತೆ ರೈಲು ಮಾಹಿತಿ ಫಲಕದ ಮೇಲೆ ಬೀಳುತ್ತದೆ.ಅಲ್ಲಿನ ಮಾಹಿತಿಯ ಪ್ರಕಾರ ದೆಹಲಿಯಿಂದ ಬರುವ ರೈಲು ಎರಡು ಗಂಟೆ ಬಳಿಕ ಬರುವುದೆಂದು ಪ್ರಕಟವಾಗುತ್ತಿರುತ್ತದೆ. ಇದ್ದನ್ನು ನೋಡಿ ನೀವು ಬೇಸರಗೊಂಡುಎರಡು ನಿಮಿಷಗಳನ್ನು ಕಳೆಯಲು ಕಷ್ಟ ಪಡುತ್ತಿದ್ದ ನಿಮಗೆ ಎರಡು ಗಂಟೆಗಳು ಕಾಯಬೇಕೆಂಬ ಚಿಂತೆ!  
Image Source:wikimedia Commons
ಟಿಕೇಟ್ ಕಲೆಕ್ಟರ್ ತೊರಿಸಿದ್ದು ಕೇವಲ ಎರಡು ಬೆರಳು. ಈತ ಎರಡು ಗಂಟೆ ಅಥವಾ ನಿಮಿಷ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ನೀವು ಕೂಡ ನಿಮ್ಮ ಮಿತ್ರನನ್ನು ಕಾಣುವ ಕಾತುರದಿಂದ ಎರಡು ನಿಮಿಷವೆಂದು ತಿಳಿದುಕೊ೦ಡಿರಿ ಸರೀನಾಇದೇ ಯೋಚನೆಯಲ್ಲಿ ಪಕ್ಕದಲ್ಲಿ ಇದ್ದ ಬೆಂಚ್ ಮೇಲೆ ಕುಳಿತು ಈ ಗೊಂದಲ ಹೇಗೆ ಹುಟ್ಟಿತು ಎಂಬ ಪ್ರಶ್ನೆಈ ಪ್ರಸಂಗದಿಂದ ನಮಗೆ ಮಾಪನದ ಬಳಿಕೆಯ ಪ್ರಾಮುಖ್ಯತೆಯನ್ನು ಗಮನಿಸಬಹುದು. ಕೇವಲ ಸಂಖ್ಯೆಗಳ ಮೂಲಕ ಪೂರ್ಣ ವಿಷಯವನ್ನು ಪಡೆಯಲು ಸಾಧ್ಯವಿಲ್ಲ ಸಂಖ್ಯೆಗಳು ಒಂದು ಗಣಿತದ ವಸ್ತು! ಹೇಗೆ ಟಿಕೆಟ್ ಕಲೆಕ್ಟರ್ ಮಾಪನವನ್ನು ಬಳಕೆಮಾಡದೆ ಕೇವಲ ತನ್ನ ಎರಡು ಬೆರಳುತೋರಿಸಿ ನಿಮಗೆ ಗೊಂದಲ ಉ೦ಟುಮಾಡಿದನೋ ಅದೇ ರೀತಿ ಮಾಪನಗಳಿಲ್ಲದ ಯಾವುದೇ ಸ೦ಖ್ಯೆ ಪೂರ್ಣ ಅರ್ಥ ನೀಡುವುದಿಲ್ಲ. ಬೆಂಚ್ ಮೇಲೆ ನಿಮಗೆ ಕುಳಿತ್ತಿದ್ದ ಮತ್ತೊಂದು ಪ್ರಶ್ನೆ ಕಾಡಲು ಆರಂಭಿಸುತ್ತದೆ. ಈ ಮಾಪನಗಳ ಮುಖ್ಯ ಪ್ರಾಮುಖ್ಯತೆ ಏನು ಮತ್ತು ಸರಿಯಾದ ವೈಜ್ಞಾನಿಕ ವ್ಯಾಖ್ಯಾನ ಏನಿರಬಹುದುಒಂದು ವೇಳೆ ಟಿಕೆಟ್ ಕಲೆಕ್ಟರ್ ಸರಿಯಾಗಿ ಎರಡು ಗಂಟೆ ಎಂದು ಹೇಳಿದರೆ ಇದರ ಅರ್ಥವೇನುಗಂಟೆ ಎಂದರೇನುನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ನಮಗೆ ಶಿಕ್ಷಕರು ಒಂದು ಗಂಟೆಯಲ್ಲಿ ೬೦ ನಿಮಿಷಗಳಿರುತ್ತದೆ ಮತ್ತು ಪ್ರತಿ ನಿಮಿಷದಲ್ಲಿ ೬೦ ಸೆಕೆಂಡುಗಳಿರುತ್ತದೆ ಎಂದು ಹೇಳಿಕೊಟ್ಟಿದ್ದಾರೆ. ಇಲ್ಲಿ ನೀವು ಗಂಟೆ ಯನ್ನು ಸೆಕೆಂಡ್ ಗಳಾಗಿ ಪರಿವರ್ತನೆ ಮಾಡಿದ್ದೀರ. ಹಾಗಾದರೆ ಸೆಕೆಂಡ್ ಗಳನ್ನು ಯಾವ ರೀತಿ ವಿವರಿಸಬೇಕುಸರಿಯಾದ ಅರ್ಥದಲ್ಲಿಸೆಕೆಂಡು ಎಂದರೆ ಸರಾಸರಿ ೧/೮೬೪೦೦ನೇ ಭಾಗದ ಸೌರ ದಿನ (೧ ದಿನ= ೨೪*೬೦*೬೦=೮೬೪೦೦ಸೆಕಂಡುಗಳು). ಹಾಗಾದರೆ ಸೌರ ದಿನ ಎಂದರೇನುಎರಡು ಮಧ್ಯಾಹ್ನಗಳ ನಡುವೆ ಇರುವ ಸಮಯದ ಅಂತರಾಳವೆ ಒಂದು ಸೌರದಿನ.
Image Source:Wikimedia Commons
(ಆಕಾಶದಲ್ಲಿ ಸೂರ್ಯನ ಅತಿ ಎತ್ತರದ ಬಿಂದುವನ್ನುನಾವು ಮಧ್ಯಾಹ್ನ ಎನ್ನಬಹುದುಮಧ್ಯಾಹ್ನದ ಅರ್ಥ ೧೨ ಗಂಟೆ ಅಲ್ಲ.) ಆದರೆ ಎಲ್ಲ ದಿನದ ಮಧ್ಯಾಹ್ನ ಒಂದೇ ಆಗಿರುವುದಿಲ್ಲ. ನಮ್ಮ ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ  ಕಾರಣದಿ೦ದ ನಮಗೆ ಪ್ರತಿ ಒಂದು ಸೌರದಿನ ಬೇರೆ-ಬೇರೆ ಆಗಿರುತ್ತದೆ. ಅದಕ್ಕಾಗಿ ನಾವು ಒಂದು ವರ್ಷದಲ್ಲಿ ನಡೆಯುವ ಎಲ್ಲ ಸೌರದಿನದ ಸರಾಸರಿಯ ಗಣನೆಯನ್ನು ತೆಗೆದುಕೊಳ್ಳುತ್ತೇವೆ.(ವರ್ಷದ ಎಲ್ಲಾ ದಿನಗಳ ಸಮಯದ ವಿಸ್ತಾರವನ್ನು ಕೂಡಿ ಅದನ್ನು ಒಂದು ವರ್ಷದಲ್ಲಿ ಉಂಟಾಗುವ ದಿನಗಳಿಂದ ಅಂದರೆ ೩೬೫ ದಿನಗಳಿಂದ ಭಾಗಿಸುವುದರಿಂದ ನಮಗೆ ಒಂದು ಸೆಕೆಂಡಿನ ನಿಖರವಾದ ಮೌಲ್ಯ ತಿಳಿಯುತ್ತದೆ). ಹೀಗೆ ಯೋಚನೆ ಮಾಡುತ್ತ ನಿಮಗೆ ೨ ಗಂಟೆಗಳು ಕಳೆದು ಹೋಗಿದ್ದು ತಿಳಿಯದೆ ಇನ್ನೇನು ನಿಮ್ಮ ಮಿತ್ರನ ರೈಲು ಬರಲು ಕೆಲವೇ ನಿಮಿಷಗಳಲ್ಲಿ ಬರಲಿದೆ.ದೆಹಲಿಯಿಂದ ಬಂದಿರುವ ಮಿತ್ರನನ್ನು ನೋಡಿ ಖುಷಿಯಿಂದ ಆತನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಲು ಒಂದು ಟ್ಯಾಕ್ಸಿಯನ್ನು ಬಾಡಿಗೆ ಕರೆದು ಮತ್ತು ಈ ಬಾರಿ ನೀವು ಟ್ಯಾಕ್ಸಿಚಾಲಕನಿಗೆ ಸ್ಪಷ್ಟವಾಗಿ೩ ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಿ ಕಿರುನಗುತ್ತಾ ನಿಮ್ಮ ಮಿತ್ರನೊಂದಿಗೆ ಟ್ಯಾಕ್ಸಿ ಕುಳಿತು ರೈಲು ನಿಲ್ದಾಣದಲ್ಲಿ ನಡೆದ ಘಟನೆಯನ್ನು ವಿವರಿಸುತ್ತೀರಾ … ನಿಮ್ಮ ಮಿತ್ರನು ರೈಲು ನಿಲ್ದಾಣದಲ್ಲಿ ನಡೆದ ಪ್ರಸಂಗವನ್ನು ಕೇಳಿ ನಗುತ್ತನಿಮ್ಮ ಸೆಕೆಂಡಿನ ವ್ಯಾಖ್ಯಾನ ಸರಿಯಾಗಿಲ್ಲ ಎಂದು ವಾದಿಸುತ್ತಾನೆ. ನಮ್ಮ ಭೂಮಿ ಸೂರ್ಯನ ಸುತ್ತ ಗೋಳ ಅಕಾರದಲ್ಲಿ ಪ್ರದಕ್ಷಿಣೆ ಹಾಕುತ್ತಿಲ್ಲ. ಭೂಮಿ ಸೂರ್ಯನ ಸುತ್ತ ಅಂಡಾಕೃತಿಯಲ್ಲಿ ಪರಿಭ್ರಮಿಸುತ್ತದೆ ಮತ್ತು ನಮ್ಮ ಭೂಮಿಯ ಪರಿಭ್ರಮಣೆ ಗತಿ ಕಡಿಮೆಯಾಗುತ್ತಿದೆ. ಈ ಕಾರಣದಿಂದ ನಾವು ಸೌರದಿನ ಲೆಕ್ಕ ನಮಗೆ ಸೆಕೆಂಡಿನ ಸರಿಯಾದ ಮೌಲ್ಯ ನೀಡುವುದಿಲ್ಲ. 
Image Source:Wikimedia Commons
ನಿಖರವಾದ ಮೌಲ್ಯ ತಿಳಿಯಲು ನಾವು ಪರಮಾಣು ಗಡಿಯಾರವನ್ನು ಉಪಯೋಗಿಸುತ್ತೇವೆ.ಸೀಸಿಯಮ್-೧೩೩ ಧಾತುವಿನ ಮೇಲೆ ಮೈಕ್ರೋವೇವ್ ತರಂಗವನ್ನು ಹಾಯಿಸಿದಾಗ ಸೀಸಿಯಮ್ ಧಾತುವಿನ ಶಕ್ತಿಯ ವ್ಯತ್ಯಾಸವಾಗುತ್ತದೆ. ಸೀಸಿಯಮ್ ೯೧೯೨೬೩೧೭೦೦ನಲ್ಲಿ ಆ೦ದೋಲನಿಸುತ್ತದೆ.ಆ೦ದೋಲನವೇ ಒಂದು ಸೆಕೆಂಡಿನ ಸರಿಯಾದ ವ್ಯಾಖ್ಯಾಯನ. ನಾವು ಈ ಪರಿಮಾಣದ ಗಡಿಯಾರವನ್ನು ದೈನ೦ದಿನ  ಜೀವನದಲ್ಲಿ ಬಳಸುವುದಿಲ್ಲ. ಆದರೆ ವಿಜ್ಞಾನಿಕ ಪ್ರಯೋಗಗಳಲ್ಲಿ ಸೆಕೆಂಡಿನ ನಿಖರತೆ ಅತ್ಯಾಮೂಲ್ಯವಾದದ್ದು. ನೀವು ಈಗ ಮಾಪನಗಳ ಪ್ರಾಮುಖ್ಯತೆಯನ್ನು ಅರಿತಿದ್ದೀರಾ ಅಲ್ವಾಮುಂದಿನ ಲೇಖನದಲ್ಲಿ ನಾವು ಇನ್ನಷ್ಟು ಹೆಚ್ಚುಮಾಹಿತಿಯೊಂದಿಗೆ ಕಲಿಯೋಣ.
    ಮೂಲ ಲೇಖಕ ಲೇಖಕ: ರೋಶನ್ ಸ್ವಹಿಲ್ 


ಅನುವಾದಿಸಿದವರು:ಪ್ರಜ್ವಲ್ ಎಂ

ನಿಮ್ಮ ಜ್ಞಾನವನ್ನು ಪರೀಕ್ಷಿ

Comments

  1. Live Roulette | Online Roulette from Real Money at
    Play real 바카라 사이트 casino roulette from real money at Real Money Casinos. In fact, it's kadangpintar legal to 제왕카지노 play in roulette online right now. You must bet at least one moneyline

    ReplyDelete

Post a Comment

Popular posts from this blog

ಉದ್ದ ಅಳತೆಗಳ ಮೂಲಮಾನ

ಗಣಿತಶಾಸ್ತ್ರದ ಪ್ರಾಮುಖ್ಯತೆ!

ಭೌತಶಾಸ್ತ್ರ ಏಂದರೇನು?